Wednesday, November 17, 2010


ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೊತೆ ಎಂದು ನಾನಿರುವೆ ನಿನ್ನಾಣೆ
ರಾತ್ರಿಯ ಬೆನ್ನಿಗೆ ಬೆಳ್ಳನೆ ಹಗಲು
ಚಿಂತೆಯ ಹಿಂದೆಯೆ ಸಂತಸ ಇರಲು ||ಒಂದೇ||
ನೋವಿನ ಬಾಳಿಗೆ ಧೈರ್ಯವೇ ಗೆಳೆಯ
ಪ್ರೇಮದ ಜೋಡಿಗೆ ಆಗದು ಪ್ರಳಯ ||ಒಂದೇ||
ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ
ಸುಟ್ಟುಹಾಕೋ ಬೆಂಕಿಯೇ ತನ್ನ ತಾನೆ ಸುಟ್ಟರೆ
ದಾರಿ ತೋರೋ ನಾಯಕ ಒಂಟಿ ಎಂದುಕೊಂಡರೆ
ಧೈರ್ಯ ಹೇಳೋ ಗುಂಡಿಗೆ ಮೂಕವಾಗಿ ಹೋದರೆ
ಸೂರ್ಯನಿಲ್ಲ ಪೂರ್ವದಲ್ಲಿ ಚಂದ್ರನಿಲ್ಲ ರಾತ್ರಿಯಲಿ
ದಾರಿಯಿಲ್ಲ ಕಾಡಿನಲಿ ಆಸೆ ಇಲ್ಲ ಬಾಳಿನಲಿ
ನಂಬಿಕೆ ತಾಳುವ ಅಂಜಿಕೆ ನೀಗುವ
ಶೋಧನೆ ಸಮಯ ಚಿಂತಿಸಿ ಗೆಲ್ಲುವ


                                                                                                              
ನೂರೂ ಜನ್ಮಕೂ...
ನೂರೂ ಜನ್ಮಕೂ ನೂರಾರೂ ಜನ್ಮಕೂ
ನೂರೂ ಜನ್ಮಕೂ ನೂರಾರೂ ಜನ್ಮಕೂ
ಒಲವಾ ಧಾರೆಯೇ ಒಲಿದೊಲಿದೂ ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ
ನೂರು ಜನ್ಮಕೂ...

ಬಾಳೆಂದರೇ ಪ್ರಣಯಾನುಭಾವ ಕವಿತೆ
ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದೀ ಓಹೋಹೋ
ನನ್ನೆದೆಯ ಬಾಂದಳದೀ ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲೀ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೇ

ನೂರೂ ಜನ್ಮಕೂ...

ಬಾ ಸಂಪಿಗೆ ಸವಿಭಾವಲಹರೀ ಹರಿಯೇ
ಪನ್ನೀರ ಜೀವನದೀ
ಬಾ ಮಲ್ಲಿಗೆ ಮಮಕಾರ ಮಾಯೇ
ಲೋಕದಾ ಸುಖವೆಲ್ಲಾ ಓಹೋಹೊ
ಲೋಕದಾ ಸುಖವೆಲ್ಲಾ ನಿನಗಾಗಿ ಮುಡಿಪಿರಲೀ
ಇರುವಂಥ ನೂರು ಕಹೀ
ಇರಲಿರಲಿ ನನಗಾಗಿ
ಕಾಯುವೆನೂ ಕೊನೆವರೆಗೂ ಕಣ್ಣಾಗಿ
       

                                                                       ಚಿತ್ರ: ಅಮೇರಿಕಾ ಅಮೇರಿಕಾ
                                                                 ನಿರ್ದೇಶನ, ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
                                                                                 ಸಂಗೀತ: ಮನೋ ಮೂರ್ತಿ 




Sunday, October 10, 2010

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು |ಪ|
ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ |೧|ಯಾವ|
ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ |೨|ಯಾವ|
ವಿವಶವಾಯಿತು ಪ್ರಾಣ ಹಾ! ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ |೩|ಯಾವ|
                                                        
                                                               

                                                                                           ಸಾಹಿತ್ಯ : ಗೋಪಾಲ ಕೃಷ್ಣ ಅಡಿಗ
                                                                                           ಸಂಗೀತ : ಮೈಸೂರು ಅನಂತಸ್ವಾಮಿ


                                         

Friday, October 8, 2010

ಅಮ್ಮ, ನಿನ್ನ ಎದೆಯಾಳದಲ್ಲಿ

ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೋಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಆಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಆಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ
                                   KAVI....

ಸ್ನೇಹ ಮಾಡಬೇಕಿಂತವಳ!

 ಸ್ನೇಹ ಮಾಡಬೇಕಿಂತವಳ!
-----------------------

ಸ್ನೇಹ ಮಾಡಬೇಕಿಂಥವಳ! - ಒಳ್ಳೇ
ಮೋಹದಿಂದಲಿ ಬಂದು - ಕೂಡುವಂಥವಳ

ಚಂದ್ರಗಾವಿ ಶೀರೀನುಟ್ಟು - ದಿವ್ಯ
ಕೆಂದಾವರಿ ಮಗ್ಗಿ ಕುಪ್ಪಸ ತೊಟ್ಟು
ಬಂದಳು ಮಂದಿರ ಬಿಟ್ಟು - ನಾಲ್ಕು
ಮಂದಿಯೊಳು ಬಂದು ನಾಚುವಳೆಷ್ಟು!

ಅರಗಿಳಿ ಸಮ ಇವಳ ನುಡಿಯು - ಚೆಲ್ವ
ಸುಳಿನಾಭಿ ಕುಚಕುಂಭಗಳ ಹಂಸನಡೆಯು
ಥಳಥಳಿಸುವ ತೋಳ್ತೊಡೆಯು - ಒಳ್ಳೇ
ಬಳುಬಳುಕುವ ನಡುವು ತಳಿರಡಿಯು.

ಮುಕ್ತ ಕಾಮಿನಿ ಎನ್ನ ಕಾಡಿ - ಮೋಹ
ಮತ್ತ ಸುರತಸುಖ ಸುಡುವಂತೆ ಕೂಡಿ
ಹುಟ್ಟನ್ನೇ ಕಳೆದಳೊ ಖೋಡಿ - ದೇವ
ಶಿಶುನಾಳಾಧೀಶನ ಪಾದಕೆ ದೂಡಿ!

-ಸಂತ ಶಿಶುನಾಳ ಶರೀಫ

Friday, September 24, 2010

ನಾ ಕಂಡ ಕನಸಲ್ಲಿ…
 ಎನ್ನರಸಿ ಬಂದವಳು ನೀನು…
ಮನದಂಗಳಕೆ…
ಬೆಳದಿಂಗಳ ತಂದವಳು ನೀನು…
 ಮನದ ಮುಗಿಲಲ್ಲಿ…
 ಹರಡಿದ ಮೊಡಗಳಾ ಸಾಲು..
 ಮಂದಾರ ಪುಷ್ಪದಂತೆ ಅರಳಿ ನಿಂತವಳು …
ಆ ಮೊಡಗಳು ಸುರಿಸುವ…
ಮಳೆ ಹನಿಗಳ ಸಾಲು…
ಅದರಿಂದ ಮೊಡಿ ನಿಂತ..
ಮಳೆ ಬಿಲ್ಲು ನೀನು…

ನನ್ನಯ ಪಯಣ ಒಂದಿರುಳು ಕತ್ತಲಲಿ

ನನ್ನಯ ಪಯಣ ಒಂದಿರುಳು ಕತ್ತಲಲಿ, ಬೆಳದಿಂಗಳ ರಾತ್ರಿಯಲಿ…
 ಕಳೆದು ಹೋಗಿದ್ದೆ ನಾನು… ಮೋಹದಾ ಬೀದಿಯಲಿ, ಪ್ರೇಮದಾ ಹಾದಿಯಲಿ..
 ನಡೆದು ಹೋಗಿದ್ದೆ ನಾನು… ಪ್ರೀತಿಯಲಿ ಕುರುಡಾಗಿ, ಮೋಹಕ್ಕೆ ಮರುಳಾಗಿ…
ಮೂಢನಾಗಿದ್ದೆ ನಾನು… ನನ್ನವರನ್ನು ತೊರೆದೆ, ಎಲ್ಲರನು ಜರಿದೆ…
 ಈ ಪ್ರೀತಿಗಾಗಿ ನಾನು… ಅದು ದೊರೆಯದಿದ್ದಾಗ, ನನಗಲ್ಲವೆಂದಾಗ… ಮೂರ್ಖ ಮಂಗನಂತಾಗಿದ್ದೆ ನಾನು…
ಸ್ನೇಹವೆಂಬಾ ಬೆಳಕು ಬಾಳಿನೊಂದಿಗೆ ಥಳಕು… ಹಾಕಿಕೊಂಡಿತು ಆಗ…
ಅಂದಕಾರವ ಅಳಿಸಿ, ಮೋಹವನ್ನು ಥಳಿಸಿ… ನನ್ನೊಳಗೆ ಸೆರಿಕೊಂಡಿದೆ ಈಗ..

Saturday, July 31, 2010

ನೀನು ನನ್ನನ್ನು ಪ್ರೀತಿ ಮಾಡುತೀಯಾ?

ನಿನಗೆ ಸಾದ್ಯವಾದರೆ


ನೀನು ನನ್ನನ್ನು ಪ್ರೀತಿ ಮಾಡುತೀಯಾ? 
ಹಾಗಾದರೆ ಪ್ರೀತಿಯ ಆಳವನ್ನು ತೋರಿಸು,

ನೀನು ನನ್ನನ್ನು ದ್ವೇಷಿಸುವೆಯಾ ?
ಹಾಗಾದರೆ ದ್ವೇಷದ ಎತ್ತರವನ್ನು ತೋರಿಸು,

ನೀನು ನನಗೊಸ್ಕ್ರರ ಕಣ್ನಿರು ಹಾಕುತೀರುವೆಯಾ?
ಹಾಗಾದರೆ ಆ ನಿನ್ನ ಕಣ್ಣೀರಿನಲ್ಲಿ ನನ್ನನ್ನು ಮುಳುಗಿಸಿ ತೋರಿಸು,

ನೀನು ನನಗೋಸ್ಕರ ಭೂಮಿ ಯಲ್ಲಿ ಜೀವಂತ ವಾಗಿರುವಿಯಾ?
ಹಾಗಾದರೆ ನಿನಗೆ ಸಾದ್ಯವಾದರೆ ನನ್ನನ್ನು ನಿನ್ನ ತೋಳಿನಲ್ಲಿ ಶಾಶ್ವತವಾಗಿ ಅಪ್ಪಿಕೊ...